Publicidade

Salmos 3

ಶತ್ರುಬಾಧಿತನಾದ ದೈವಭಕ್ತನ ಉದಯಗೀತೆ
ದಾವೀದನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿಹೋದಾಗ ರಚಿಸಿದ ಕೀರ್ತನೆ.

1 ಯೆಹೋವನೇ, ನನ್ನ ವಿರೋಧಿಗಳು ಎಷ್ಟೋ ಹೆಚ್ಚಾಗಿದ್ದಾರೆ;

ನನಗೆ ವೈರಿಗಳಾಗಿ ನಿಂತ ಜನರು ಅತ್ಯಧಿಕವಾಗಿದ್ದಾರೆ.

2 ಅನೇಕರು ನನ್ನ ವಿಷಯದಲ್ಲಿ, "ಅವನಿಗೆ ದೇವರಿಂದ ಸಹಾಯವು ಆಗುವುದೇ ಇಲ್ಲ" ಎಂದು ಹೇಳಿಕೊಳ್ಳುತ್ತಾರೆ. ಸೆಲಾ

3 ಆದರೂ ಯೆಹೋವನೇ, ನೀನು ನನ್ನನ್ನು ಕಾಯುವ ಗುರಾಣಿಯೂ;

ನೀನು ನನ್ನ ಗೌರವಕ್ಕೆ ಆಧಾರನೂ,

ನನ್ನ ತಲೆಯನ್ನು ಎತ್ತುವಂತೆ ಮಾಡುವವನೂ ಆಗಿದ್ದೀ.

4 ನಾನು ಸ್ವರವೆತ್ತಿ ಯೆಹೋವನಿಗೆ ಮೊರೆಯಿಡುವಾಗ,

ಆತನು ತನ್ನ ಪರಿಶುದ್ಧ ಪರ್ವತದಿಂದ ಸದುತ್ತರವನ್ನು ಅನುಗ್ರಹಿಸುತ್ತಾನೆ. ಸೆಲಾ.

5 ಯೆಹೋವನು ನನ್ನನ್ನು ಕಾಪಾಡುವವನು,

ಆದುದರಿಂದ ನಾನು ಮಲಗಿಕೊಂಡು ನಿದ್ದೆಮಾಡಿ ಸುಖವಾಗಿ ಎಚ್ಚರಗೊಂಡೆನು.

6 ನನ್ನ ಸುತ್ತಲು ಸನ್ನದ್ಧರಾಗಿ ನಿಂತಿರುವ

ಸಾವಿರಾರು ವೈರಿಗಳಿಗಾದರೂ ನಾನು ಹೆದರೆನು.

7 ಯೆಹೋವನೇ, ನನ್ನ ದೇವರೇ,

ನನ್ನ ಎಲ್ಲಾ ಶತ್ರುಗಳ ದವಡೆಯನ್ನು ಬಡಿದು ಅವರ ಹಲ್ಲುಗಳನ್ನು ಉದುರಿಸಿಬಿಟ್ಟವನೇ,

ಎದ್ದು ಬಂದು ನನ್ನನ್ನು ರಕ್ಷಿಸು.

8 ಜಯವು ಯೆಹೋವನಿಂದಲೇ ಉಂಟಾಗುವುದು.

ಯೆಹೋವನೇ, ನಿನ್ನ ಆಶೀರ್ವಾದವು ನಿನ್ನ ಜನರ ಮೇಲೆ ಇರಲಿ. ಸೆಲಾ.

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-