Pular para o conteúdo
Publicidade

ನಿರ್ಗಮನ್ 30:1,6-8,10

SII25 Bíblia Siddi

ಧುಪ್ ಜಾಳ್ವುತಲೊ ಕಟ್ಟೊ

1 ಅನಿ ಬರ್ಯಾ ವಾಸೆಚ್ಯಾ ಪಾನಿಯಾನಿ ಧುಪ್ ಜಾಳ್ವುಕ್ ಸಾಟ್ನಿ ಜಾಲಿಚ್ಯಾ ಝಾಡಾನ್ ಎಕ್ ಕಟ್ಟೊ ಕರುಚೆ. 6 ತೆ ಕರಾರಾಚ್ಯಾ ಪೆಟಿಚ್ಯಾ ಇದ್ರಾಕ್ ಮಟ್ಲ್ಯಾರ್, ಕರಾರಾಚ್ಯಾ ಪೆಟಿಚ್ಯಾ ವರ್‍ತಿ ಮಿಯಾ ತುಕಾ ದಿಸ್ತಲ್ಯಾ ಕರ್ಪಾಸನಾಚ್ಯಾ ಇದ್ರಾಕ್ ಥವ್ಚೆ. 7 ಹರ್ ಎಕ್ ದಿಸಿ ಸಕ್ಕಾಳಾಕ್ ಆರೊನಾನ್ ತೆಜ್ಯಾ ವರ್‍ತಿ ಬರ್ಯಾ ವಾಸೆಚೊ ಧುಪ್ ಜಾಳ್ವುಚೆ. 8 ಅನಿ ಸಾಂಚೆಕ್ಡೆ ದಿವೊ ಪೆಟ್ವುತಲ್ಯಾ ಎಳಾರ್, ಬರ್ಯಾ ವಾಸೆಚ್ಯಾ ತೆಲಾನಿ ಧುಪ್ ಜಾಳ್ವುಚೆ, ಅಸೆ ತುಮ್ಚೆಕ್ನಾ ಅನಿ ತುಮ್ಚ್ಯಾ ಪಿಳ್ಗಿಕ್ನಾ ಸರ್ವೆಸ್ಪರಾಚ್ಯಾ ಇದ್ರಾಕ್ ಸದ್ದಾಚೆ ಧುಪ್ ಜಾಳ್ವುನ್ ಹೊವ್ಚೆ. 10 ಆರೊನಾನ್ ಅನಿ ತೆಚ್ಯಾ ಪಿಳ್ಗಿಚ್ಯಾನಿ ತೆಜ್ಯಾ ಶಿಂಗಾಕ್ನಿ ವರ್ಸಾಕ್ ಎಗ್ದಾ ಬಲಿ ಭೆಟ್ವಲ್ಲ್ಯಾ ಜನಾವರಾಚೆ ರಗಾತ್ ಲಾವ್ನ್ ಪಾಪ್ ಮಾಪಿ ಕರುನ್ ಘೆವ್ಚೆ, ತೆಚ್ ಸರ್ವೆಸ್ಪರಾಕ್ ಅಗ್ದಿ ನಿತಳ್ ಹೊಲ್ಲೆ ರ್‍ಹಾತಾ ಮಟ್ಲ್ಯಾನ್.

Em outras traduções

  1. IRVKAN Indian Revised Version (IRV) - Kannada - 2019

    1 "ಸುಗಂಧದ್ರವ್ಯಗಳಿಂದ ಧೂಪಹಾಕುವುದಕ್ಕೆ ನೀವು ಜಾಲೀಮರದಿಂದ ಒಂದು ಧೂಪವೇದಿಯನ್ನು ಮಾಡಿಸಬೇಕು. 6 ಆಜ್ಞಾಶಾಸನವಿರುವ ಮಂಜೂಷದ ಮುಂದಣ ಪರದೆಗೆ ಎದುರಾಗಿ, ಅಂದರೆ ಆಜ್ಞಾಶಾಸನವಿರುವ ಮಂಜೂಷದ ಮೇಲಿರುವಂಥ ಮತ್ತು ನಾನು ನಿನಗೆ ದರ್ಶನ ಕೊಡುವಂಥ ಕೃಪಾಸನದ ಮುಂದೆ ಅದನ್ನು ಇಡಬೇಕು.

    7 "ಆರೋನನು ಪ್ರತಿನಿತ್ಯ ಹೊತ್ತಾರೆಯಲ್ಲಿ ದೀಪಗಳನ್ನು ಸರಿಪಡಿಸುವಾಗಲೂ 8 ಸಾಯಂಕಾಲದಲ್ಲಿ ದೀಪಗಳನ್ನು ಹೊತ್ತಿಸುವಾಗಲೂ ಅದರ ಮೇಲೆ ಸುಗಂಧದ್ರವ್ಯಗಳಿಂದ ಧೂಪವನ್ನು ಹಾಕಬೇಕು. ಹೀಗೆ ನಿಮ್ಮಿಂದಲೂ ನಿಮ್ಮ ಸಂತತಿಯವರಿಂದಲೂ ಯೆಹೋವನ ಸನ್ನಿಧಿಯಲ್ಲಿ ನಿರಂತರವಾದ ಧೂಪ ಸಮರ್ಪಣೆಯು ನಡೆಯುತ್ತಿರಬೇಕು. 10 ಆರೋನನು ಅವನ ಸಂತತಿಯವರೂ ವರ್ಷಕ್ಕೆ ಒಂದು ಸಾರಿ ದೋಷಪರಿಹಾರಕ ಯಜ್ಞದ ಪಶುವಿನ ರಕ್ತವನ್ನು ಆ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ ಅದರ ಕುರಿತಾಗಿ ದೋಷಪರಿಹಾರವನ್ನು ಮಾಡಬೇಕು. ಅದು ಯೆಹೋವನಿಗೆ ಅತಿ ಪರಿಶುದ್ಧವಾಗಿದೆ."

  2. OKCV Kannada Contemporary Version

    1 "ನೀನು ಜಾಲಿ ಮರದ ಕಟ್ಟಿಗೆಯಿಂದ ಧೂಪವೇದಿಯನ್ನು ಮಾಡಬೇಕು. 6 ಅದನ್ನು ಒಡಂಬಡಿಕೆಯ ಮಂಜೂಷದ ಮುಂದೆ ಇರುವ ಪರದೆಯ ಮುಂದೆಯೂ ನಾನು ನಿನ್ನನ್ನು ಸಂಧಿಸುವ ಸ್ಥಳದಲ್ಲಿ ಇರುವ ಮಂಜೂಷದ ಮೇಲಿನ ಕರುಣಾಸನದ ಮುಂದೆಯೂ ಇಡಬೇಕು.

    7 "ಅದರ ಮೇಲೆ ಆರೋನನು ಪರಿಮಳ ಧೂಪವನ್ನು ಸುಡಬೇಕು. ಪ್ರತಿದಿನ ಬೆಳಿಗ್ಗೆ ಸುಡಬೇಕು. ಪ್ರತಿದಿನ ಬೆಳಿಗ್ಗೆ ದೀಪಗಳನ್ನು ಸಿದ್ಧಮಾಡುವಾಗ ಅದನ್ನು ಸುಡಬೇಕು. 8 ಆರೋನನು ಸಂಜೆ ದೀಪಗಳನ್ನು ಹಚ್ಚುವ ಸಮಯದಲ್ಲಿ ಧೂಪವೇದಿಯ ಮೇಲೆ ಧೂಪವನ್ನು ಸುಡಬೇಕು. ಅದೇ ನಿಮ್ಮ ಸಂತತಿಯವರಿಗೆ ಯೆಹೋವ ದೇವರ ಮುಂದೆ ಅರ್ಪಿಸಬೇಕಾದ ನಿತ್ಯವಾದ ಧೂಪವು. 10 ಆರೋನನು ಮತ್ತು ಅವನ ಸಂತತಿಯವರು ವರ್ಷಕ್ಕೆ ಒಂದು ಸಾರಿ ಪಾಪ ಪರಿಹಾರದ ಬಲಿಯ ರಕ್ತದಿಂದ ಅದರ ಕೊಂಬುಗಳಿಗೆ ಹಚ್ಚಿ ಪ್ರಾಯಶ್ಚಿತ್ತ ಮಾಡಬೇಕು. ಅದು ಯೆಹೋವ ದೇವರಿಗೆ ಮಹಾಪರಿಶುದ್ಧವಾದದ್ದು."

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.