Pular para o conteúdo
Publicidade

ಉತ್ಪತ್ತಿ 14:14-16,18-20

SII25 Bíblia Siddi

14 ಲೊಟಾಕ್ ಭಂದಿ ಕರುನ್ ಘೆವ್ನ್ ನ್ಹೆಲಾತ್ ಮನ್ತಲೆ ಅಬ್ರಾಹಾಮಾಕ್ ಕಳಲ್ಯಾ ತನ್ನಾ ಅಪ್ನಾಚ್ಯಾ ಘರ್‍ಹಾತ್ ಲಡಾಯ್ ಕರುಕ್ ತಯಾರ್ ಹೊತ್ತ್ಯಾ ತಿನ್ಸೆ ಆಟ್ರಾ ಲೊಕಾಕ್ನಿ ತಯಾರ್ ಕರುನ್ ಘೆವ್ನ್ ತೆಂಚಿ ಪಾಟ್ ಲಾಗುನ್ ದಾನ್ ಮನ್ತಲ್ಯಾ ಶಾರಾ ಪಾತರ್ ಪಳ್ಸುನ್ ಘಾಟ್ಲ್ಯಾನ್. 15 ಅನಿ ರಾತ್ತಿನ್ ಅಪ್ಲ್ಯಾ ಸೈನಾಚೆ ದೊನ್ ವಾಟೆ ಕರುನ್ ಅಬ್ರಾಮ್ ಅನಿ ಸೆವಕಾ ದುಶ್ಮನಾಚ್ಯಾ ವರ್‍ತಿ ಲಡಾಯ್ ಕರ್ಲ್ಯಾನಿ, ಅನಿ ತೆಂಕಾ ಹಾರ್ವುನ್ ದಮಸ್ಕಾಚ್ಯಾ ಉತ್ತರ್ ದಿಕ್ಕಾಕ್ ಹೊಬಾ ಗಾಂವಾಕ್ ಪಳಸ್ಲ್ಯಾನಿ. 16 ಮಾನಾ ಅಬ್ರಾಮಾನ್ ವಿರೊಧಿ ಘೆವ್ನ್ ಗೆಲ್ಲ್ಯಾ ಲೊಟಾಕ್ ಅನಿ ಸಗ್ಳಿ ವಸ್ತಾ ಅಪ್ಲಿ ಆಸ್ತಿ ಅನಿ ಭಂಧಿಕರುನ್ ನೆಲ್ಲ್ಯಾ ಬಾಯ್ಕಾಮಾನ್ಸಾಕ್ನಿ ಅನಿ ಬಂಧಿ ಹೊಲ್ಲ್ಯಾ ಹರ್ ಎಕ್ಬಿ ಸೊಡ್ಸುನ್ ಹಾನ್ಲ್ಯಾನ್.

18 ಅನಿ ಸಾಲೆಮಾಚೊ ರಾಜಾ ಮಲ್ಕಿಜೆದೆಕ್ಬಿ ಅಬ್ರಾಹಾಮಾಕ್ ಭೆಟುಕ್ ಮನುನ್ ಯೆತಾ ತೊ ಮೊಹನ್ನತ್ ದೆವಾಚೊ ಯಾಜಕ್ ಹೊಲ್ಲೊ ರ್‍ಹಾತಾ, ಅನಿ ತೊ ತೆಕಾ ಮನುನ್ ಭಾಕ್ರಿಯಾ ಅನಿ ವಾಯ್ನ್ ಘೆವ್ನ್ ಯೆಲೊ, 19 ಅನಿ ಅಬ್ರಾಹಾಮಾಕ್ ಆಶಿರ್ವಾದ್ ದಿವ್ನ್ ಅಬ್ರಾಮಾ, ಮಳಬ್ ಅನಿ ಜಿಮಿನ್ ರಚಲ್ಲೊ ಮೊಟೊ ದೆವ್ ತುಕಾ ಆಶಿರ್ವಾದ್ ದಿಂವ್ದಿತ್ ! 20 ತುಜ್ಯಾ ದುಶ್ಮನಾಂಚ್ಯಾಕ್ನಾ ಜಿಕುಕ್ ತುಕಾ ಮಜತ್ ಕರಲ್ಲ್ಯಾ ಮೊಹನ್ನತ್ ದೆವಾಕ್ ಸ್ತುತಿ ಹೊಂವ್ದಿತ್! ಮಟ್ಲ್ಯಾನ್, ಅನಿ ಅಬ್ರಾಮಾನ್ ತೆಕಾ ಯುದ್ದಾತ್ ಜಿಕುನ್ ಹಾನಲ್ಯಾ ಸಾಮಾನಾತ್ ಧಾತ್ಲೊ ಎಕ್ ವಾಟೊ ದಿಲ್ಯಾನ್.

Em outras traduções

  1. IRVKAN Indian Revised Version (IRV) - Kannada - 2019

    14 ಅಬ್ರಾಮನು ತನ್ನ ತಮ್ಮನ ಮಗನು ಸೆರೆಗೆ ಸಿಕ್ಕಿದ್ದನ್ನು ಕೇಳಿ ತನ್ನ ಮನೆಯಲ್ಲೇ ಹುಟ್ಟಿ ಬೆಳೆದ ಶಿಕ್ಷಿತರಾದ ಮುನ್ನೂರ ಹದಿನೆಂಟು ಮಂದಿ ಆಳುಗಳನ್ನು ಯುದ್ಧಕ್ಕೆ ಸಿದ್ಧಮಾಡಿಕೊಂಡು ಹೊರಟು ಆ ರಾಜರನ್ನು ದಾನೂರಿನವರೆಗೂ ಹಿಂದಟ್ಟಿದನು. 15 ಅವನು ರಾತ್ರಿ ವೇಳೆಯಲ್ಲಿ ತನ್ನ ದಂಡನ್ನು ಎರಡು ಭಾಗಮಾಡಿ ತನ್ನ ಭಟರೊಡನೆ ಅವರ ಮೇಲೆ ಬಿದ್ದು, ಹೊಡೆದು, ದಮಸ್ಕ ಪಟ್ಟಣದ ಉತ್ತರಕಡೆಯಲ್ಲಿರುವ ಹೋಬಾ ಊರಿನ ತನಕ ಅವರನ್ನು ಹಿಂದಟ್ಟಿದ್ದನು. 16 ರಾಜರು ಅಪಹರಿಸಿದ್ದ ಎಲ್ಲಾ ವಸ್ತುಗಳನ್ನು ಅವನು ತಿರುಗಿ ಪಡೆದುಕೊಂಡನು. ತನ್ನ ತಮ್ಮನ ಮಗನಾದ ಲೋಟನನ್ನೂ ಅವನ ಆಸ್ತಿಯನ್ನೂ ಬಿಡಿಸಿಕೊಂಡದ್ದಲ್ಲದೆ, ಸೆರೆಯಲ್ಲಿದ್ದ ಸ್ತ್ರೀಯರನ್ನೂ, ಉಳಿದಿದ್ದ ಜನರನ್ನು ಕರೆದುಕೊಂಡು ಬಂದನು.

    18 14:18 ಯೆರೂಸಲೇಮ್. ಸಾಲೇಮಿನ ಅರಸನಾದ ಮೆಲ್ಕೀಚೆದೆಕನು ಸಹ ಬಂದು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ಕೊಟ್ಟನು. ಇವನು ಪರಾತ್ಪರನಾದ ದೇವರ ಯಾಜಕನಾಗಿದ್ದನು.

    19 ಇವನು ಅಬ್ರಾಮನನ್ನು ಆಶೀರ್ವದಿಸಿ, "ಭೂಮ್ಯಾಕಾಶವನ್ನು ನಿರ್ಮಾಣಮಾಡಿದ ಪರಾತ್ಪರನಾದ ದೇವರ ಆಶೀರ್ವಾದವು ಅಬ್ರಾಮನಿಗೆ ದೊರೆಯಲಿ; 20 ಪರಾತ್ಪರನಾದ ದೇವರು ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ್ದಕ್ಕಾಗಿ ಆತನಿಗೆ ಸ್ತೋತ್ರ" ಎಂದು ಹೇಳಿದನು. ಅಬ್ರಾಮನು ತಾನು ಗೆದ್ದು ತಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಯಾಜಕನಿಗೆ ಕೊಟ್ಟನು.

  2. OKCV Kannada Contemporary Version

    14 ತನ್ನ ಸಹೋದರನ ಮಗನು ಸೆರೆಯಾಗಿ ಹೋಗಿರುವುದನ್ನು ಕೇಳಿದಾಗ, ಅಬ್ರಾಮನು ತನ್ನ ಮನೆಯಲ್ಲಿ ಹುಟ್ಟಿ, ಶಿಕ್ಷಿತರಾಗಿದ್ದ ಮುನ್ನೂರ ಹದಿನೆಂಟು ಸೇವಕರನ್ನು ಯುದ್ಧಕ್ಕೆ ಸಿದ್ಧಮಾಡಿ, ದಾನಿನವರೆಗೆ ಹಿಂದಟ್ಟಿದನು. 15 ಅಬ್ರಾಮನು ರಾತ್ರಿಯಲ್ಲಿ ಅವರಿಗೆ ವಿರೋಧವಾಗಿ ತನ್ನ ಸೇವಕರ ಸೈನ್ಯವನ್ನು ವಿಭಾಗಿಸಿ, ಅವರನ್ನು ಹೊಡೆದು, ದಮಸ್ಕದ ಉತ್ತರದಲ್ಲಿ ಹೋಬಾದವರೆಗೆ ಅವರನ್ನು ಸೋಲಿಸಿದನು. 16 ಆಸ್ತಿಯನ್ನೆಲ್ಲಾ ಹಿಂದಕ್ಕೆ ತೆಗೆದುಕೊಂಡು ಬಂದನು. ತನ್ನ ಬಂಧುವಾದ ಲೋಟನನ್ನೂ, ಅವನ ಸಂಪತ್ತನ್ನೂ ಸ್ತ್ರೀಯರನ್ನೂ ಜನರನ್ನೂ ಹಿಂದಕ್ಕೆ ತೆಗೆದುಕೊಂಡು ಬಂದನು.

    18 ಸಾಲೇಮಿನ ಅರಸ ಮೆಲ್ಕಿಜೆದೇಕನು ರೊಟ್ಟಿ ಮತ್ತು ದ್ರಾಕ್ಷಾರಸವನ್ನು ತಂದನು. ಇವನು ಮಹೋನ್ನತರಾದ ದೇವರ ಯಾಜಕನೂ ಆಗಿದ್ದನು. 19 ಇವನು ಅಬ್ರಾಮನನ್ನು ಹೀಗೆ ಆಶೀರ್ವದಿಸಿದನು:

    "ಅಬ್ರಾಮನು ಭೂಮಿ, ಆಕಾಶವನ್ನು ಸೃಷ್ಟಿಸಿದ

    ಮಹೋನ್ನತ ದೇವರಿಂದ ಆಶೀರ್ವಾದ ಹೊಂದಲಿ.

    20 ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ

    ಮಹೋನ್ನತ ದೇವರು ಸ್ತುತಿಹೊಂದಲಿ."

    ಅಬ್ರಾಮನು ಎಲ್ಲವುಗಳಲ್ಲಿ ಅವನಿಗೆ ಹತ್ತನೆಯ ಒಂದು ಭಾಗವನ್ನು ಕೊಟ್ಟನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.