Publicidade

Salmos 122

ಯಾತ್ರಿಕರು ಯೆರೂಸಲೇಮನ್ನು ಸ್ಮರಿಸುವುದು
ಯಾತ್ರಾಗೀತೆ; ದಾವೀದನ ಕೀರ್ತನೆ.

1 "ಯೆಹೋವನ ಮಂದಿರಕ್ಕೆ ಹೋಗೋಣ ಬಾ!"

ಎಂದು ಜನರು ನನ್ನನ್ನು ಕರೆದಾಗ ನನಗೆ ಸಂತೋಷವಾಯಿತು.

2 ಯೆರೂಸಲೇಮೇ! ನಮ್ಮ ಕಾಲುಗಳು,

ನಿನ್ನ ಬಾಗಿಲುಗಳಲ್ಲಿ ಸೇರಿರುತ್ತವಲ್ಲಾ.

3 ಯೆರೂಸಲೇಮೇ! ನೀನು ಸರಿಯಾದ ಹೊಂದಿಕೆಯಿಂದ,

ಕಟ್ಟಲ್ಪಟ್ಟ ನಗರವಾಗಿದ್ದಿ.

4 ಕುಲಗಳು ಅಂದರೆ ಯೆಹೋವನ ಕುಲದವರು,

ಯೆಹೋವನ ನಾಮದ ಕೀರ್ತನೆಗೋಸ್ಕರ,

ಇಲ್ಲಿಗೆ ಯಾತ್ರೆ ಮಾಡುತ್ತಿದ್ದರು.

ಇದು ಇಸ್ರಾಯೇಲರಲ್ಲಿದ್ದ ಕಟ್ಟಳೆಯಷ್ಟೆ.

5 ನ್ಯಾಯಪೀಠಗಳಾಗಿರುವ ದಾವೀದನ ಮನೆತನದವರ,

ಸಿಂಹಾಸನಗಳು ಇಲ್ಲಿಯೇ ಇದ್ದವಲ್ಲಾ.

6 ಯೆರೂಸಲೇಮಿನ ಸಮಾಧಾನಕ್ಕಾಗಿ ಪ್ರಾರ್ಥಿಸಿರಿ.

"ಯೆರೂಸಲೇಮೇ, ನಿನ್ನನ್ನು ಪ್ರೀತಿಸುವವರಿಗೆ ಸೌಭಾಗ್ಯವುಂಟಾಗಲಿ.

7 ನಿನ್ನ ಪೌಳಿಗೋಡೆಗಳೊಳಗೆ ಶುಭವುಂಟಾಗಲಿ;

ನಿನ್ನ ಅರಮನೆಗಳಲ್ಲಿ ಸೌಭಾಗ್ಯವಿರಲಿ."

8 ನನ್ನ ಬಂಧುಮಿತ್ರರ ನಿಮಿತ್ತವಾಗಿ,

"ನಿನಗೆ ಸಮಾಧಾನವಾಗಲಿ" ಎಂದು ಹೇಳುತ್ತೇನೆ.

9 ನಮ್ಮ ದೇವರಾದ ಯೆಹೋವನ ಮಂದಿರದ ನಿಮಿತ್ತವಾಗಿ,

ನಿನ್ನ ಸುಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ.

Veja também

Publicidade
Bíblia Online Bíblia Online

Bíblia Online • Versão: 2026-06-20_17-16-08-