Pular para o conteúdo
Publicidade

ಕೀರ್ತನೆಗಳು 128:1-6

IRVKAN Indian Revised Version (IRV) - Kannada - 2019

ಭಕ್ತನ ಭಾಗ್ಯ

1 ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ,

ಆತನ ಮಾರ್ಗಗಳಲ್ಲಿ ನಡೆಯುವವನು ಧನ್ಯನು.

2 ನಿನ್ನ ಕಷ್ಟಾರ್ಜಿತವನ್ನು ನೀನೇ ಅನುಭವಿಸುವಿ,

ನೀನು ಧನ್ಯನು, ನಿನಗೆ ಶುಭವಿರುವುದು.

3 ಅಂತಃಪುರದಲ್ಲಿರುವ ನಿನ್ನ ಹೆಂಡತಿಯು,

ಫಲಭರಿತವಾದ ದ್ರಾಕ್ಷಾಲತೆಯಂತೆ ಇರುವಳು;

ನಿನ್ನ ಸಂಗಡ ಊಟದ ಮಣೆಯ ಸುತ್ತಲೂ ಕುಳಿತುಕೊಳ್ಳುವ ನಿನ್ನ ಮಕ್ಕಳು,

ಎಣ್ಣೇಮರದ ಸಸಿಗಳ ಹಾಗೆ ಇರುವರು.

4 ಇಗೋ, ಯೆಹೋವನಲ್ಲಿ ಭಯಭಕ್ತಿಯುಳ್ಳ ಪುರುಷನು,

ಈ ರೀತಿಯಾಗಿ ಆಶೀರ್ವಾದ ಹೊಂದುವನು.

5 ಚೀಯೋನಿನಲ್ಲಿರುವ ಯೆಹೋವನು ನಿನ್ನನ್ನು ಆಶೀರ್ವದಿಸಲಿ;

ಜೀವಮಾನವೆಲ್ಲಾ ಯೆರೂಸಲೇಮಿನ ಸೌಭಾಗ್ಯವನ್ನು ನೋಡುವವನಾಗು.

6 ಮಕ್ಕಳ ಮಕ್ಕಳನ್ನು ಕಾಣುವವನಾಗು.

ಇಸ್ರಾಯೇಲರಿಗೆ ಶುಭವಾಗಲಿ.

Em outras traduções

  1. OKCV Kannada Contemporary Version

    1 ಯೆಹೋವ ದೇವರಿಗೆ ಭಯಪಟ್ಟು ಅವರ ಮಾರ್ಗಗಳಲ್ಲಿ

    ನಡೆದುಕೊಳ್ಳುವ ಪ್ರತಿಯೊಬ್ಬನು ಧನ್ಯನು.

    2 ನಿನ್ನ ಕೈಗಳ ಕಷ್ಟಾರ್ಜಿತವನ್ನು ನೀನು ಊಟಮಾಡಿ

    ಆಶೀರ್ವಾದವನ್ನೂ ಅಭಿವೃದ್ಧಿಯನ್ನೂ ಹೊಂದುವಿ.

    3 ನಿನ್ನ ಹೆಂಡತಿಯು ನಿನ್ನ ಮನೆಯಲ್ಲಿರುವ

    ಫಲಭರಿತವಾದ ದ್ರಾಕ್ಷಿಬಳ್ಳಿಯ ಹಾಗೆ ಇರುವಳು.

    ನಿನ್ನ ಮೇಜಿನ ಸುತ್ತಲಿರುವ ನಿನ್ನ ಮಕ್ಕಳು,

    ಓಲಿವ್ ಮರಗಳ ಸಸಿಗಳ ಹಾಗೆ ಇರುವರು.

    4 ಯೆಹೋವ ದೇವರಿಗೆ ಭಯಪಡುವ ಮನುಷ್ಯನು

    ಹೀಗೆಯೇ ಆಶೀರ್ವಾದ ಹೊಂದುವನು.

    5 ಯೆಹೋವ ದೇವರು ನಿನ್ನನ್ನು ಚೀಯೋನಿನೊಳಗಿಂದ

    ನಿನ್ನ ಜೀವಮಾನವೆಲ್ಲಾ ಆಶೀರ್ವದಿಸಲಿ;

    ನೀನು ಯೆರೂಸಲೇಮಿನ ಸಮೃದ್ಧಿಯನ್ನು ಕಾಣುವಿ.

    6 ನೀನು ಮಕ್ಕಳ ಮಕ್ಕಳನ್ನು ಕಾಣುವ ಬದುಕು ನಿನಗಿರಲಿ

    ಇಸ್ರಾಯೇಲರ ಮೇಲೆ ಸಮಾಧಾನವಿರಲಿ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.